Tuesday 22 May, 2012

ಇದು ಬೊಂಬೆಯಾಟವಯ್ಯಾ..


ನಿನ್ನೆ ಅನ್ನಪ್ಪನ ಹುಟ್ಟುಹಬ್ಬದಲ್ಲಿ 'ಬೊಂಬೆ ಮನೆ'ಯ ಜಯಶ್ರೀ ರಾಜು ಅವರು ಒಂದು ಬೊಂಬೆಯಾಟ ಪ್ರದರ್ಶಿtಸಿದರು. ಅದರ ಒಂದು ಝಲಕ್ ಇಲ್ಲಿದೆ:




ಜಯಶ್ರೀಯವರ ಕಥಾ ನಿರೂಪಣೆ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ನಮ್ಮ ಅನ್ನಪ್ಪ ಅವರು ಹೇಳಿದ ಕತೆಯನ್ನು ಒಂದೇ ಸಲ ಕೇಳಿ ಕಲಿತುಕೊಂಡಿದ್ದಾನೆ:







ಜಯಶ್ರೀಯವರು ಬೊಂಬೆಯಾಟದ ಮೂಲಕ ಮನರಂಜನೆಯ ಜೊತೆಗೆ ಮನೋವಿಕಾಸ ಮಾಡಿಸುವುದು ತುಂಬ ಪರಿಣಾಮಕಾರಿಯಾಗಿದೆ.



ಜಯಶ್ರೀಯವರ ಕೌಶಲ್ಯ, ಅವರ ಸಲಕರಣೆಗಳು, ಅವರ ತಯಾರಿ ತುಂಬ ಚೆನ್ನಾಗಿಯಿದೆಯಾದರೂ, ಇನ್ನೂ ಒಂದೆರಡು ವಿಷಯಗಳಲ್ಲಿ ಸುಧಾರಿಸಬಹುದು ಎನಿಸುತ್ತದೆ:



೧. ಹಂದಿಮರಿ/ಕತ್ತೆಗಳು ಬಹುಷಃ ನಮ್ಮ ಸ್ಟಿರಿಯೋಟೈಪಿಕ ಮನಸುಗಳಿಗೆ ಒಳ್ಳೆಯ ಪಾತ್ರಗಳಾಗಿ ಕಾಣಿಸುವುದಿಲ್ಲ :-). ಆವುಗಳ ಬದಲು ನಾಯಿ-ಮೊಲ-ಅಳಿಲು-ಮಂಗಗಳನ್ನು ಉಪಯೋಗಿಸಿದರೆ ಒಳ್ಳೆಯದು.

೨. ನಮ್ಮ ಭಾರತೀಯ ಮೂಲದ ಕತೆ-ಕಥನ ಕಾವ್ಯಗಳೂ ಆಧುನಿಕ ಬೊಂಬೆಯಾಟದಂತಹ ಮಾಧ್ಯಮದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಪುಣ್ಯಕೋಟಿಯ ಕತೆ, ಕಿಂದರಿಜೋಗಿಯ ಕತೆ, ಹಸುವಿನ ಹಾಡು ಇತ್ಯಾದಿಗಳೂ ಕೂಡ ಚೂರೇ ಚೂರು ಪರಿಶ್ರಮದಿಂದ ಬೊಂಬೆಯಾಟಕ್ಕೆ ಹೊಂದಿಕೊಳ್ಳಬಲ್ಲವು ಎನಿಸುತ್ತೆ.

No comments: