Friday, 7 November 2008

ಹಾಲು ಮಾರಿ ಬರತೇನಿ

ಅಳಬೇಡ ಪಾಪಣ್ಣಿ
ಸಂತೆಗೆ ಹೋಗಿ ಬರತೇನಿ

ಹಾಲು ಮಾರಿ ಬರತೇನಿ
ಹಸರು ಅಂಗಿ ತರತೇನಿ

ಮೊಸರು ಮಾರಿ ಬರತೇನಿ
ಕುಸರಿ ಅಂಗಿ ತರತೇನಿ

ಮಜ್ಜಿಗಿ ಮಾರಿ ಬರತೇನಿ
ಗೆಜ್ಜಿ ಉಡದಾರ ತರತೇನಿ

ಬೆಣ್ಣೀ ಮಾರಿ ಬರತೇನಿ
ಉಣ್ಣಿ ಅಂಗಿ ತರತೇನಿ

1 comment:

Unknown said...

ಇದು ನೀವೇ ಬರೆದಿದ್ದೆ ಅಥವಾ ಜನಪದವೇ? ನೀವೇ ಬರೆದಿದ್ದಾದರೆ, ಇದನ್ನು creative commons ಅಡಿಯಲ್ಲಿ ಬಳಸಿಕೊಳ್ಳಬಹುದೇ? ಅಂದರೆ ಯಾವುದೇ ಲಾಭವಿಲ್ಲದ ಮಕ್ಕಳಿಗಾಗಿ ಇರುವ ಫ್ರೀ ಪ್ಲಾಟ್‍ ಫಾರ್ಮ್ https://community.ekstep.in/ ನಲ್ಲಿ ಬಳಸಿಕೊಳ್ಳಬಹುದೇ?