Sunday, 27 April 2008

ಆನಿ ಬಂತೋಂದು ಆನಿ

ಆನಿ ಬಂತೋಂದು ಆನಿ

ಯಾವೂರು ಆನಿ ?

ಬಿಜಾಪುರದ ಆನಿ

ಇಲ್ಲಿಗ್ಯಾಕ ಬಂತು ?

ಹಾದಿ ತಪ್ಪಿ ಬಂತು ?

ಹಾದಿಗೊಂದು ದುಡ್ಡು

ಬೀದಿಗೊಂದು ದುಡ್ಡು

ಅದS ದುಡ್ಡು ಕೊಟ್ಟು

ಶೇರು ಕೊಬ್ಬರಿ ತಂದು

ಲಟಲಟ ಮುರಿದು

ಅನ್ನಪ್ಪನ ಬಾಯಾಗ ಇಟ್ತು !

No comments: