ನಾವು ಚಿಕ್ಕವರಿದ್ದಾಗ ಅಂಚೆ ಕಾರ್ಡುಗಳನ್ನು ನಡುವೆ ಮಡಿಚಿ, ಅವುಗಳನ್ನು ಒಂದರ ಹಿಂದೆ ಒಂದಾಗಿ ಜೋಡಿಸಿ ಇಟ್ಟು ಕೊನೆಗೆ ಕೊನೆಯ ಕಾರ್ಡನ್ನು ಊದಿ ಬೀಳಿಸಿದಾಗ, ಈಗ ಇಂಗ್ಲಂಡಿನಲ್ಲಿ ಭಾರತದ ವಿಕೆಟ್ಟು ಬೀಳುವಂತೆ, ಕಾರ್ಡುಗಳು ಬೀಳುವ ಆಟ ಆಡುತ್ತಿದ್ದೆವು. ಅದಕ್ಕೆ ನಾವು ಕಾರ್ಡಿನ ರೈಲು ಎನ್ನುತ್ತಿದ್ದೆವು.
ಈ ದಿನಗಳಲ್ಲಿ ಅಷ್ಟೊಂದು ಅಂಚೆ-ಕಾರ್ಡುಗಳು ಎಲ್ಲಿ ಬರಬೇಕು ? ಅದಕ್ಕೆ ನಮ್ಮ ಅನ್ನಪ್ಪ ನನ್ನ ಹಳೆಯ ವಿಸಿಟಿಂಗ್ ಕಾರ್ಡುಗಳ ರೈಲು ಮಾಡಿ ಆಡ್ತಾ ಇದ್ದಾನೆ ನೋಡಿ:
ಇದರಲ್ಲಿ ಆಟದ ಜೊತೆಗೆ ಪಾಠವೂ ಆಗಲಿ ಎಂದರೆ, ಬೇರೆ- ಬೇರೆ ಅಕ್ಷರಗಳ ಆಕೄತಿಯನ್ನೂ ಮಾಡಬಹುದು- ಇಲ್ಲಿ ಅನ್ನಪ್ಪ ವಾಯ್ ಮಾಡಿದಂತೆ..
No comments:
Post a Comment