Sunday, 28 February 2010

೩ ಜೋಗುಳ


ಯಾಕ ಅಳತಾನಂತ ಎಲ್ಲರನ ಕೇಳೇನ,
ಕಾಸಿದ್ದ ಹಾಲು ಕೆನೆ ಮೊಸರು,
ಕಾಸಿದ್ದ ಹಾಲು ಕೆನೆ ಮೊಸರು ಕೊಟ್ಟರ ಅಳುವದ ಬಿಟ್ಟು ನಗತಾನ...

ಅನ್ನಪ್ಪನಾಟವ ಮಲ್ಲಿಗಿ ತ್ವಾಟವ
ಅಲ್ಲಿ ತರುವರು ಕಮಲಾವ
ಕಮಲ ಬೆಳದಿಂಗಳು
ಯೆಲ್ಲರಂಗಳಕ ಚೆಲ್ಲ್ಯದ
ಬಾರ ಬಾರ ಅನ್ನಪ್ಪ

ಯಾಕಳುವೆ ಓ ಕಂದ ಬೇಕಾದ್ದು ನಿನಗೇನು?
ಸಾಕಷ್ಟು ಕರೆದ ನೊರೆ ಹಾಲು
ನೊರೆ ಹಾಲು ಕೊಟ್ಟರೆ ಗಪ್ಪುಚಿಪ್ಪಾಗಿ ಮಲಗ್ಯಾನ.
( ಸ್ನೇಹಿತರ ಕೊಡುಗೆ )

No comments: