Friday, 25 April 2008

ಆಯವ್ವ ಅಳದೀರ

ಆಯವ್ವ ಅಳದೀರ
ಅಂಗಳಕ ಬರದಿರ
ನಿಂಬಿಯ ವನ ತಿಳಿನೀರ
ತಿಳಿನೀರ ತರುವಾಗ, ಕಂದ ಅನ್ನಪ್ಪ ಅಳದೀರ !!

1 comment:

Manjula said...

ಇನ್ನೆರಡು ಜೋಗುಳ ಹಾಡುಗಳು.. :-)

ಕೂಸು ಕುಂಚಿಗಿ ತಿಂತ
ಹಾಸಿಗಿ ನೆಲ ತಿಂತ
ಮಾದಿಟ್ಟ ಅಡಿಗಿ ಒಲಿ ತಿಂತ
ಪುಟ್ಟಕ್ನ ಇದ್ದಷ್ಟು ಮೂಗು ಇಲಿ ತಿಂತ..

ಆಡಿ ಬಾ ನನ ಕಂದ
ಅಂಗಾಲ ತೊಳದೇನ
ತೆಂಗಿನ ಕಾಯಿ ತಿಳಿ ನೀರು
ತೆಂಗಿನ ಕಾಯಿ ತಿಳಿ ನೀರ ತಕ್ಕೊಂಡು
ಕಂದಮ್ನ ಪಾದ ತೊಳದೇನ..