Sunday, 28 July 2013

ಮಗ್ಗಿಯ ಸುಗ್ಗಿ

ಪುಟ್ಟಾ ಇದೊಂದು ಪಜಲ್. ಇಲ್ಲಿ ಕೊಟ್ಟಿರುವ ಸುಳಿವುಗಳನ್ನು ಉಪಯೋಗಿಸಿ, ಇದರ ಜೊತೆಗಿರುವ ಚೌಕದಿಂದ ಉತ್ತರ ಕಂಡು ಹಿಡಿದು, ಅದನ್ನು ಇಲ್ಲಿ ಕೊಟ್ಟಿರುವ ಡಬ್ಬಿಗಳಲ್ಲಿ ಬರೆದು, ಅದರ ಕೆಳಗೆ ಶಬ್ದಕ್ಕೆ ಸಂಬಂಧ ಪಟ್ಟಂತೆ ಒಂದು ವಾಕ್ಯ ಬರೆಯಬೇಕು. ಉದಾಹರಣೆಗಾಗಿ ಮೊದಲ ಪ್ರಶ್ನೆಯನ್ನು ಉತ್ತರಿಸಲಾಗಿದೆ.

1. ಎರಡರ ಮಗ್ಗಿಯ ಮೊದಲ 4 ಅಂಕಿಗಳು

ನಿ
ಮಿ
.

…… ಇದು ನನ್ನ ಹೆಸರು. ………………………………………………………………………………

2. ಮೂರರ ಮಗ್ಗಿಯ ಮೊದಲ 5 ಅಂಕಿಗಳು

………………………………………………………………………………………………………………………………

3. ನಾಲ್ಕರ ಮಗ್ಗಿಯನಾಲ್ಕು ನಾಲ್ಕಲೆಇಂದ ನಾಲ್ಕು ಒಂಭತ್ತಲೆವರೆಗೆ

………………………………………………………………………………………………………………………………

4. ಐದರ ಮಗ್ಗಿಯ ಐದು ಐದಲೆಇಂದ ಐದು ಎಂಟಲೆ ವರೆಗೆ

………………………………………………………………………………………………………………………………

5. ಆರರ ಮಗ್ಗಿಯ ಆರು ಏಳಲೆಇಂದ ಆರು ಒಂಬತ್ತಲೆ ವರೆಗೆ

………………………………………………………………………………………………………………………………

6. ಏಳರ ಮಗ್ಗಿಯ ಏಳು ಏಳಲೆಇಂದ ಏಳು ಹತ್ತಲೆವರೆಗೆ

………………………………………………………………………………………………………………………………

7. ಎಂಟರ ಮಗ್ಗಿಯ ಎಂಟು ಎಂಟಲೆಇಂದ ಎಂಟು ಹತ್ತಲೆ ವರೆಗೆ

………………………………………………………………………………………………………………………………

8. ಒಂಬತ್ತರ ಮಗ್ಗಿಯ ಒಂಬತ್ತೈದಲೆಇಂದ ಒಂಬತ್ತಾರಲೆ ವರೆಗೆ

………………………………………………………………………………………………………………………………

9. ಹತ್ತರ ಮಗ್ಗಿಯ ಹತ್ತ ನಾಕಲೆಇಂದ ಹತ್ತಾರಲೆ ವರೆಗೆ

………………………………………………………………………………………………………………………………

Tuesday, 2 April 2013

ಆಯಸ್ಕಾಂತದ ಆಟಗಳು

ಅನಿಮಿಷ ಮೊನ್ನೆ ತಮ್ಮ ಶಾಲೆಯ ಸೈನ್ಸ್ ಎಕ್ಸಿಬೀಷನಿನಲ್ಲಿ ತೋರಿಸಿದ ಎರಡು ಆಯಸ್ಕಾಂತದ ಆಟಗಳು ಇಲ್ಲಿವೆ.

1.ಮ್ಯಾಗ್ನೆಟ್ ಮೀನ:

2.ಮ್ಯಾಗ್ನೆಟ್ ಮಂಗ:

Monday, 4 March 2013

ಅನ್ನಪ್ಪನ ಪ್ರಶ್ನೆಪತ್ರಿಕೆ-೦೨

ಕಳೆದ ರಜೆಯಲ್ಲಿ ಅನ್ನಪ್ಪನಿಗಾಗಿ ನಾವು ಒಂದಿಷ್ಟು ಕವನಗಳನ್ನು/ಕತೆಗಳನ್ನು ಕೂಡಿ ಹಾಕಿ, ಅವುಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ಬರೆಯುವ ಕೆಲಸ ಕೊಟ್ಟಿದ್ದೆವು. ಆ ಪ್ರಶ್ನೆಪತ್ರಿಕೆ ಇಲ್ಲಿವೆ:

Saturday, 2 March 2013

ಅನ್ನಪ್ಪನ ಪ್ರಶ್ನೆಪತ್ರಿಕೆ-೦೧

ಕಳೆದ ರಜೆಯಲ್ಲಿ ಅನ್ನಪ್ಪನಿಗಾಗಿ ನಾವು ಒಂದಿಷ್ಟು ಕವನಗಳನ್ನು/ಕತೆಗಳನ್ನು ಕೂಡಿ ಹಾಕಿ, ಅವುಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ಬರೆಯುವ ಕೆಲಸ ಕೊಟ್ಟಿದ್ದೆವು. ಆ ಪ್ರಶ್ನೆಪತ್ರಿಕೆ ಇಲ್ಲಿವೆ:

Monday, 1 October 2012

ಗಂಡಾಗುಂಡಿ ಗೊಂಬಿ ಮತ್ತು ಕಾಗದದ ಚಪ್ಪಾಳೆ

"ಆಹಾ! ಎಷ್ಟೊಂದು ಚಟುವಟಿಕೆಗಳು .." ಪುಸ್ತಕದಿಂದ ನಮ್ಮ ಅನಿಮಿಷನಿಗೆ ಮಾಡಿ ಕೊಟ್ಟ ಎರಡು ಆಟಿಗೆಗಳ ವಿಡಿಯೋ ಇಲ್ಲಿದೆ:

ಪುಸ್ತಕದ ಲೇಖಕ ಶ್ರೀ ಅರವಿಂದ ಗುಪ್ತಾ ತಮ್ಮ ಬ್ಲಾಗ್ ನಲ್ಲಿ ಹಲವಾರು ಸರಳ ಆಟಿಗೆಗಳ ಮಾಹಿತಿ ಕೊಟ್ಟಿದ್ದಾರೆ, ಒಂದ್ಸಲ ನೋಡಿ.

Sunday, 30 September 2012

ಒಂದು ಮುಂಜಾವಿನಲಿ ...

ಅನಿಮಿಷನಿಗೆ ಗೊತ್ತಿಲ್ಲದಂತೆಯೇ ಏನಾದರೂ ಹೊಸ ಆಟಿಗೆ ತಂದಿದ್ದರೆ, ಬೆಳ್ಳಂ ಬೆಳಿಗ್ಗೆಯೇ ಒಂದು ಟ್ರಷರ್ ಹಂಟ್ ತರಹದ ಸೆಟಪ್ಪು ಮಾಡಿ ಅವನಿಗೆ ಕೊಡುವುದು ರೂಢಿ. ಈ ಸಲದ  ಟ್ರಷರ್ ಹಂಟ್ನಲ್ಲಿ ನಮ್ಮ ಮನೆಯ ಮ್ಯಾಪ್ ಮಾಡಿ ಅದರಲ್ಲಿ ಸುಳುಹುಗಳನ್ನು ಕೊಟ್ಟಿದ್ದೆವು. ಅದರ ವಿಡಿಯೋ ಇಲ್ಲಿದೆ:

ವಿಡಿಯೋದಲ್ಲಿ ಅನಿಮಿಷ ಮುಖ್ಯ ಪಾತ್ರದಲ್ಲಿ, ಅವರಪ್ಪ ಸೈಡ್ ರೋಲ್ನಲ್ಲಿದ್ದರೆ, ಅಜ್ಜಿಯದು ಗೆಸ್ಟ್ ಅಪ್ಪೀಯರನ್ಸ್. ಕ್ಯಾಮರಾ ಕೆಲ್ಸ  ಅನಿಮಿಷನ ಅಮ್ಮನದು.

Wednesday, 22 August 2012

ನೆಹರು ಬಾಯಲ್ಲಿ ಗಾಂಧಿ ಪದ್ಯ

ಮೊನ್ನೆ ಅಗಸ್ಟ್ 15ರಂದು ನಮ್ಮ ಅನ್ನಪ್ಪ ನೆಹರು ವೇಷ ಹಾಕಿಕೊಂಡು ಗಾಂಧಿ ತಾತನ ಬಗ್ಗೆ ಒಂದು ಶಿಸುಪ್ರಾಸ ಅಂದ. ಅದರ್ ವಿಡಿಯೋ :

ಶಿಸುಪ್ರಾಸದ ಬರಹ ಇಲ್ಲಿದೆ :

ಒಂದು ದಿವಸ ಗಾಂಧಿಯವರು ಹೋದರೊಂದು ಹಳ್ಳಿಗೆ
ಅಲ್ಲಿ ಪುಟ್ಟ ಗುಡಿಸಲಲ್ಲಿ ಕಂಡರೊಂದು ಮುದುಕಿಯ
‘ಏನು ಅಮ್ಮ , ನಿಮ್ಮ ಬಟ್ಟೆ ಎಷ್ಟು ಮಲೀನವಾಗಿದೆ
ಅದನು ಬಿಟ್ಟು ಬೇರೆ ಬಟ್ಟೆ ತೊಟ್ಟು ಕೊಳ್ಳಬಾರದೇ ?’
‘ಹೌದು ಬಾಪು, ನಿಮ್ಮ ಮಾತು ಸತ್ಯವಾಗಿದೆ.
ಉಟ್ಟ ಸೀರೆ ಬಿಟ್ಟರೆನೆಗೆ ಬೇರೆ ಸೀರೆ ಎಲ್ಲಿದೆ ?’
ಅಂದಿನಿಂದ ಗಾಂಧಿಯವರು ಸೂಟು ಪ್ಯಾಂಟು ಬಿಟ್ಟರು.
ದೇಹ ಬಿಟ್ಟು ಹೋಗುವವರೆಗೂ ಒಂದೇ ಬಟ್ಟೆ ತೊಟ್ಟರು.